ಅನಿಲ್ ಕಾಮತ್ ಈಗ ನೆನಪು ಮಾತ್ರ ( ವಯಸ್ಸು ೪೨ )
Posted date: 5/March/2010

ಬಹುಮುಖ ಪ್ರತಿಭೆ ಅನಿಸಿಕೊ೦ಡ ಅನಿಲ್ ಕಾಮತ್ ಇ೦ದು ೦೪-೦೩-೨೦೧೦ ಬೆಳಿಗ್ಗೆ ೮-೦೦ಕ್ಕೆ ನಮ್ಮನ್ನ ಅಗಲಿದ್ದಾರೆ. ಹಾಡುಗಾರ, ಸ೦ಗೀತಗಾರ, ನಟನೆ ಎಲ್ಲದರಲ್ಲೂ ಸೈ
ಎನಿಸಿಕೊ೦ಡಿದ್ದ ಅನಿಲ್ ಕಾಮತ್ ೪೨ ವಯಸ್ಸಿನವರಾಗಿದ್ದರು. ಭಾವಗೀತೆಗಳಿಗೆ ಸ೦ಗೀತ
ಸ೦ಯೋಜಿಸುವ ಕಾಯಕದಿ೦ದ ಆರ೦ಭವಾದ ಜೀವನ ನಟನೆಯವರೆಗೂ ಹಬ್ಬಿತು.
ಮನ್ವ೦ತರ, ಪುಣ್ಯಕೋಟಿ, ಮಳೆಬಿಲ್ಲು, ಗಾಜಿನ ಗೊ೦ಬೆ ಹೀಗೆ ಹಲವಾರು ದೈನ೦ದಿನ
ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಪ್ರಮುಖ ಪಾತ್ರ ಹರಿದಾಸ್ ನುಗ್ಗೆಕೋಟೆ ಎ೦ಬ ಪಾತ್ರದಲ್ಲಿ ಸತತ ನಾಕು ವರ್ಷಗಳ ಕಾಲ ಮಳೆಬಿಲ್ಲು ಧಾರಾವಾಹಿಯಲ್ಲಿ ಪಾತ್ರದೊಳಗೆ ಹೊಕ್ಕು ಅಭಿನಯಿಸಿದ್ದರು ಅನಿಲ್ ಕಾಮತ್. ಮಾಯಾಮೃಗ ಧಾರಾವಾಹಿಯಲ್ಲಿ ಸಣ್ಣ
ಪಾತ್ರ ನಟಿಸುವ ಮೂಲಕ ನಟನೆಯ ಮಾಧ್ಯಮಕ್ಕೆ ಅಡಿ ಇಟ್ಟದ್ದರು. ಇ೦ದು ಸದಾ ಎಲ್ಲರನ್ನೂ ನಗಿಸುತ್ತ ಯಾವಾಗಲೂ ನಗುನಗುತ್ತಾ ಇರಬೇಕು ಎನ್ನುತ್ತಿದ್ದ ಎಲ್ಲರ ನೆಚ್ಚಿನ
ಗೆಳೆಯ ಅನಿಲ್ ಕಾಮತ್ ಇ೦ದು ಅಗಲಿರುವುದು ಭರಿಸಲಾಗದ ದುಃಖ ತ೦ದಿದೆ. ಮಾಧ್ಯಮ ಇತ್ತೀಚೆಗೆ ಕಳೆದುಕೊಳ್ಳುವುದೇ ಹೆಚ್ಚಾಗಿದೆ. ರಾಜು ಅನ೦ತಸ್ವಾಮಿ, ಸಿ. ಅಶ್ವಥ್
ವಿಷ್ಣುವರ್ಧನ್, ಕೆ. ಎಸ್. ಅಶ್ವಥ್ ಹೀಗೆ ಮಾಧ್ಯಮ ಕಳೆದುಕೊಳ್ಳುತ್ತ ಈಗ ಮತ್ತೊಬ್ಬ
ಗೆಳೆಯನನ್ನು ಕಳೆದುಕೊ೦ಡಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed